Sunday, September 6, 2009

ಆಧ್ಯಾತ್ಮಿಕ ಚೇತನ : ಜೀವನದಲ್ಲಿ ಪಾಲಿಸಬೇಕಾದ ಮೂರು ಮುಖ್ಯ ತತ್ವಗಳು

ಪ್ರತಿಯೊಬ್ಬರೂ ಜೀವನದಲ್ಲಿ ಅವಲೋಕಿಸಬೇಕಾದ ಮೂರೂ ತತ್ವಗಳು : ದೈವ ಪ್ರೀತಿ, ಪಾಪ ಭೀತಿ, ಸಂಘ ನೀತಿ. ಪ್ರತಿಯೊಬ್ಬ ವ್ಯಕ್ತಿಯೂ ಒಂದು ದೈವೀಕ ಆತ್ಮ, ಹಾಗೆಯೇ ಈ ಸಾಮಾಜವೂ ಆಧ್ಯಾತ್ಮಿಕ ತತ್ವದ ಒಂದು ವಿಭಾಗ ಅನ್ನುವುದನ್ನು ಅರಿತುಕೊಳ್ಳಬೇಕು. ಮನುಷ್ಯರಲ್ಲಿ ಪಾಪ ಭೀತಿ ಇಲ್ಲದಿರುವುದೇ ಈ ಸಮಾಜದಲ್ಲಿ ನೀತಿಧರ್ಮ ನಶಿಸಿರುವುದಕ್ಕೆ ಕಾರಣ. ಯಾರಲ್ಲಿ ಸದಾಚಾರವಿಲ್ಲವೋ ಅವರು ಮನುಷ್ಯರೇ ಅಲ್ಲ. ಆದರ್ಶ ತತ್ವಗಳು ಅತ್ಯಂತ ಮುಖ್ಯ. ದೇವರು ಎಲ್ಲರನ್ನು ಪ್ರೀತಿಸುತ್ತಾನೆ. ಒಬ್ಬನಲ್ಲಿ ದೈವೀಕ ಪ್ರೇಮವಿದ್ದಲ್ಲಿ ಸಮಾಜದಲ್ಲಿ ಒಗ್ಗಟ್ಟು ಇರುತ್ತದೆ. ಮಾಡುವ ತಪ್ಪುಗಳಿಗೆ ಶಿಕ್ಷೆಯಾಗುತ್ತದೆಯೆಂದು ಅರಿತಿದ್ದರೂ ವ್ಯಕ್ತಿಗಳು ಕೆಟ್ಟ ಕಾರ್ಯಗಳಲ್ಲಿ ತೊಡಗುತ್ತಾರೆ. ಅವರಲ್ಲಿ ಪಾಪ ಭೀತಿಯೆನ್ನುವುದೇ ಇರುವುದಿಲ್ಲ. ಪ್ರತಿಯೊಬ್ಬರಲ್ಲೂ ಪಾಪ ಭೀತಿಯಿದ್ದಲ್ಲಿ ಖಂಡಿತವಾಗಿಯೂ ಈ ಸಮಾಜದಲ್ಲಿ ನೀತಿಧರ್ಮ ನೆಲೆಸುತ್ತದೆ.

No comments:

Post a Comment